Revelation of John 14

ಕುರಿಮರಿಯು ಮತ್ತು ಆತನ ಜನರು

1ಆನಂತರ ನಾನು ನೋಡಲಾಗಿ
14:1 ಪ್ರಕ. 5:6:
ಯಜ್ಞದ ಕುರಿಮರಿಯಾದಾತನು
14:1 ಕೀರ್ತ. 2:6; ಇಬ್ರಿ. 12:22:
ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಕಂಡೆನು. ಆತನ ಜೊತೆಯಲ್ಲಿ
14:1 ಪ್ರಕ. 7:4:
ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು.
14:1 ಪ್ರಕ. 7:3:
ಅವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.
2ಇದಲ್ಲದೆ ಪರಲೋಕದಿಂದ
14:2 ಪ್ರಕ. 1:15:
ಜಲಪ್ರವಾಹದ ಘೋಷದಂತೆಯೂ
14:2 ಪ್ರಕ. 6:1; 19:6:
ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಮಹಾಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು
14:2 ಪ್ರಕ. 5:8; 15:2:
ವೀಣೆಗಳನ್ನು
14:2 ತ್ರಿಕೋನಾಕಾರದ ಒಂದು ಬಗೆಯ ತಂತಿ ವಾದ್ಯ
ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು.

3ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ
14:3 ಪ್ರಕ. 5:9:
ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ ಆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು
14:3 ಪ್ರಕ. 2:17; 19:12:
ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
4ಇವರು
14:4 ತಮ್ಮ ಶೀಲವನ್ನು ಶುದ್ಧವಾಗಿ ಇಟ್ಟುಕೊಂಡವರು ಅಥವಾ ಶೀಲವನ್ನುಳಿಸಿಕೊಂಡವರು.
ಕನ್ಯೆಯರಂತೆ
14:4 2 ಕೊರಿ. 11:2:
ಕಳಂಕರಹಿತರು, ಸ್ತ್ರೀ ಸಹವಾಸದಿಂದ ಮಲಿನರಾಗದವರು. ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನನ್ನು ಹಿಂಬಾಲಿಸುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ
14:4 ಅರಣ್ಯ. 18:12; ಯಾಕೋಬ 1:18:
ಪ್ರಥಮಫಲದಂತಾದರು.
5ಇವರ ಬಾಯಲ್ಲಿ ಸುಳ್ಳು ಇರಲೇ ಇಲ್ಲ. ಇವರು
14:5 ಯೂದ. 24:
ನಿರ್ದೋಷಿಗಳಾಗಿದ್ದಾರೆ.

ಮೂವರು ದೇವದೂತರ ಸಂದೇಶಗಳು

6ಮತ್ತೊಬ್ಬ ದೇವದೂತನು
14:6 ಪ್ರಕ. 8:13:
ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು.
7ಆ ದೂತನು, <<ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ, ಸಮುದ್ರವನ್ನೂ,
14:7 ಪ್ರಕ. 8:10; 16:4:
ನೀರಿನ ಬುಗ್ಗೆಗಳನ್ನೂ
14:7 ನೆಹೆ. 9:6; ಪ್ರಕ. 4:11:
ಉಂಟುಮಾಡಿದಾತನನ್ನು ಆರಾಧಿಸಿರಿ>> ಎಂದು ಮಹಾಧ್ವನಿಯಿಂದ ಹೇಳಿದನು.

8ಅವನ ಹಿಂದೆ ಎರಡನೆಯ ದೇವದೂತನು ಬಂದು,
14:8 ಯೆಶಾ. 21:9; ಯೆರೆ. 51:8; ಪ್ರಕ. 18:2:
<<ಬಿದ್ದಳು! ಬಿದ್ದಳು!
14:8 ದಾನಿ. 4:30; ಪ್ರಕ. 16:19; 17:5; 18:10:
ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ
14:8 ಅಥವಾ. ಜಾರತ್ವದಿಂದಾಗುವ ದೇವರ ರೌದ್ರವೆಂಬ. ಪ್ರಕ. 18:3:
ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು
14:8 ಯೆರೆ. 51:7:
ಕುಡಿಸಿದಳು>> ಎಂದು ಹೇಳಿದನು.

9ಅವನ ಹಿಂದೆ ಮೂರನೆಯ ದೇವದೂತನು ಬಂದು , <<ಯಾವನಾದರೂ ಯಾವುದೇ
14:9 ಪ್ರಕ. 13:15:
ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ
14:9 ಪ್ರಕ. 13:16:
ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ,
10ಅವನೂ ಸಹ
14:10 ಪ್ರಕ. 18:6:
ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ
14:10 ಪ್ರಕ. 16:19; ಯೋಬ. 21:20
ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ
14:10 ಪ್ರಕ. 20:10:
ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.

11
14:11 ಯೆಶಾ. 34:10; ಆದಿ. 19:28; 18:18; 19:3:
ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ,
14:11 ಪ್ರಕ. 13:15:
ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ
14:11 ಪ್ರಕ. 4:8:
ಹಗಲೂ ರಾತ್ರಿ ವಿಶ್ರಾಂತಿಯಿಲ್ಲದೆ ಇರುವರು>> ಎಂದು ಮಹಾಶಬ್ದದಿಂದ ಹೇಳಿದನು.
12
14:12 ಪ್ರಕ. 12:17:
ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ
14:12 ಪ್ರಕ. 13:10:
ದೇವಜನರ ತಾಳ್ಮೆಯು ಇಲ್ಲಿ ತೋರಿಬರಬೇಕಾಗಿದೆ.

13ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು, <<ಇಂದಿನಿಂದ
14:13 1 ಕೊರಿ. 15:18; 1 ಥೆಸ. 4:16:
ಕರ್ತನ ಭಕ್ತರಾಗಿ ಸಾಯುವವರು
14:13 ಪ್ರಕ. 20:6; ಪ್ರಸಂಗಿ 4:2:
ಧನ್ಯರು ಎಂಬುದಾಗಿ ಬರೆ>> ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು, <<ಹೌದು, ಅವರು ಧನ್ಯರೇ.
14:13 ಪ್ರಕ. 6:11:
ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳುತ್ತಾರೆ ಮತ್ತು ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ>> ಎಂದು ಹೇಳುತ್ತಾನೆ.

ಭೂಲೋಕದ ಸುಗ್ಗಿಕಾಲವನ್ನು ಕುರಿತದ್ದು

14ಆಗ ನಾನು ನೋಡಲಾಗಿ ಇಗೋ, ಒಂದು ಬಿಳಿ ಮೇಘವು ಕಾಣಿಸಿತು. ಆ ಮೇಘದ ಮೇಲೆ
14:14 ದಾನಿ. 7:13; ಪ್ರಕ. 1:13
ಮನುಷ್ಯಕುಮಾರನಂತಿದ್ದ ಒಬ್ಬಾತನು ಕುಳಿತಿರುವುದನ್ನು ಕಂಡೆನು.
14:14 ಪ್ರಕ. 6:2:
ಆತನ ತಲೆಯ ಮೇಲೆ ಚಿನ್ನದ ಕಿರೀಟವೂ, ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
15ಆಗ ಮತ್ತೊಬ್ಬ ದೂತನು
14:15 ಪ್ರಕ. 15:6:
ದೇವಾಲಯದೊಳಗಿನಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ,
14:15 ಯೆರೆ. 51:33:
<<ಭೂಮಿಯ ಪೈರು ಮಾಗಿದೆ, ಕೊಯ್ಯುವ ಕಾಲ ಬಂದಿದೆ.
14:15 ವ. 18; ಯೋವೇ. 3:13; ಮಾರ್ಕ. 4:29; ಮತ್ತಾ 13:39:
ನಿನ್ನ ಕುಡುಗೋಲನ್ನು ಹಾಕಿ ಪೈರನ್ನು ಕೊಯ್ಯಿ>> ಎಂದು ಮಹಾಧ್ವನಿಯಿಂದ ಕೂಗಿದನು.
16ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.

17ಮತ್ತೊಬ್ಬ ದೇವದೂತನು ಪರಲೋಕದಲ್ಲಿರುವ ದೇವಾಲಯದೊಳಗಿನಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು. 18ತರುವಾಯ
14:18 ಪ್ರಕ. 16:8:
ಬೆಂಕಿಯ ಮೇಲೆ ಅಧಿಕಾರ ಹೊಂದಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, <<ನಿನ್ನ ಹರಿತವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷೆಗೊಂಚಲುಗಳನ್ನು ಕೊಯ್ಯಿ.
14:18 ಯೋವೇ. 3:13:
ಅದರ ಹಣ್ಣುಗಳು ಪೂರಾ ಮಾಗಿವೆ>> ಎಂದು ಮಹಾಧ್ವನಿಯಿಂದ ಕೂಗಿದನು.

19ಆಗ ಆ ದೂತನು ತನ್ನ ಕುಡುಗೋಲಿನಿಂದ ಭೂಮಿಯ ಮೇಲಿನ ದ್ರಾಕ್ಷಿಬಳ್ಳಿಯಲ್ಲಿದ್ದ ದ್ರಾಕ್ಷಿಹಣ್ಣನ್ನು ಕೊಯ್ದು ಕೂಡಿಸಿ,
14:19 ಯೆಶಾ. 63:2, 3; ಪ್ರಲಾ. 1:15; ಪ್ರಕ. 19:15:
ದೇವರ ರೌದ್ರವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಹಾಕಿದನು.
ಆಗ ಆಲೆಯನ್ನು
14:20 ಇಬ್ರಿ. 13:12:
ಪಟ್ಟಣದ ಹೊರಗೆ ತೆಗೆದುಕೊಂಡು ಹೋಗಿ ತುಳಿದರು. ಆ ಆಲೆಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಮೇಲಕ್ಕೆ ಬಂದು
14:20 ಮೂಲ:ಸಾವಿರದ ಆರುನೂರು ಸ್ತಾದ್ಯ. [1,600]
ಮುನ್ನೂರು ಕಿಲೋಮೀಟರಿನಷ್ಟು ದೂರ ಹರಿಯಿತು.

20

Copyright information for KanULB